ಕಾವ್ಯಯಾನ

ಗಝಲ್ ಜಗತ್ತೇ ತನ್ನ ಸುತ್ತ ಸುತ್ತುತಿದೆ ಎಂದಾಗ ಹೊರಟು ಬಿಡಬೇಕು ಎಲ್ಲೆಲ್ಲೂ ಪ್ರೀತಿ ನೋಟವಿದೆ ಎಂದಾಗ ಹೊರಟು ಬಿಡಬೇಕು ಇಂದ್ರಚಾಪ ಮೂಡಿಸುವ ಹಗಲಿರುಳುಗಳೇನು ನಿರಂತರವೇ ಇಂದಿಗಿಂದಿನ ಬದುಕು ರಂಗೇರಿದೆ ಎಂದಾಗ ಹೊರಟು ಬಿಡಬೇಕು ಸುಖ ಸಂತಸಗಳು ಪ್ರತಿ ವರುಷ ಬರುವ ವಸಂತನ ತರವೇನು ಹರುಷ ನಲಿ ನಲಿದು ಉಕ್ಕುತಿದೆ ಎಂದಾಗ ಹೊರಟು ಬಿಡಬೇಕು ಎದೆಗೂಡ ಭಿತ್ತಿಯಲಿ ಒಲುಮೆ ಉಲಿವಾಗ ಸ್ವರ್ಗವೂ ನಾಚದೇನು ಸಮುಲ್ಲಾಸದಿ ಜೀವ ಗಂಧ ತೀಡುತಿದೆ ಎಂದಾಗ ಹೊರಟು ಬಿಡಬೇಕು ಇನಿಯನ ಉಸುರುಸಿರ ಬಿಸುಪು ಬೀಗಿ ಮೈ ಮನ ಮರೆಸದಿರದೇ ಕನಸು ಕಚಗುಳಿಯಿಟ್ಟು ಮಾಗುತಿದೆ ಎಂದಾಗ ಹೊರಟು ಬಿಡಬೇಕು … Continue reading ಕಾವ್ಯಯಾನ